ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್.ಜಾನಕಿ

ಆ ಆ ಆ ಆ ಆ
ಹಾಡಲೇನು.. ಮನದಾಸೆ.. ನಾನು
ಕನಸು ಕಂಡೇನು
ನಾನು.. ಹಾಡಲೇನು ಮನದಾಸೆ ನಾನು
ಕನಸು ಕಂಡೇನು..
ನಾನು ಹಾಡಲೇನು

ಅನುರಾಗದಿನ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ |೨|
ನವ ವಸಂತನು ಬಂದನೆ
ಆಶಾ ಕುಸುಮ ನಲಿದಾಡುವಾಗ |೨|
ಗಾಳಿ ಬೀಸಿತೆನೆ ಎ ಎ ಎ ಎ ಏ
ಹಾಡಲೇನು ಮನದಾಸೆ ನಾನು
ಕನಸು ಕಂಡೇನು..
ನಾನು ಹಾಡಲೇನು

ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ |೨|
ವಿಧಿ ವಿಲಾಸವ ಅರಿಯೆನೆ
ಮಧುರ ಸಾರ ಕನಸಳಿಯಿತೀಗ
ಕಣ್ಣ ತೆರೆದೇನೆ
ಕಥೆಯ ಕಾಣೇನೆ!

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ